Surprise Me!

News Cafe | BJP Preparing For 2024 Lok Sabha Election | HR Ranganath | July 25

2022-07-25 2 Dailymotion

2024 ಲೋಕಸಭೆ ಚುನಾವಣೆಗೆ ಬಿಜೆಪಿ ಈಗಿನಿಂದಲೇ ತಯಾರಿ ಆರಂಭಿಸಿದೆ. ನವದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಿನ್ನೆ ಸಿಎಂ, ಡಿಸಿಎಂಗಳ ಸಭೆಯನ್ನು ನಡೆಸಲಾಗಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಭಾಗಿಯಾಗಿದ್ದರು. ಮುಖ್ಯಮಂತ್ರಿಗಳಾದ ಬೊಮ್ಮಾಯಿ, ಯೋಗಿ ಆದಿತ್ಯನಾಥ್, ಪುಷ್ಕರ್ ಸಿಂಗ್ ಧಾಮಿ, ಹಿಮಂತ್ ಬಿಸ್ವಾ ಶರ್ಮಾ, ಭೂಪೇಂದ್ರ ಪಟೇಲ್ ತಮ್ಮ ರಾಜ್ಯಗಳ ಅಭಿವೃದ್ಧಿ ಯೋಜನೆಗಳ ಬಗ್ಗೆ ವರದಿ ಸಲ್ಲಿಸಿದ್ದಾರೆ. ಚುನಾವಣೆ ವೇಳೆ ನೀಡಿರುವ ಪ್ರಣಾಳಿಕೆ, ಬಾಕಿ ಉಳಿದಿರುವ ಕೆಲಸಗಳ ಬಗ್ಗೆ ಮೋದಿ ಜೊತೆ ಸಮಾಲೋಚನೆ ನಡೆಸಿದ್ದಾರೆ. ಬಳಿಕ ಎಲ್ಲಾ ರಾಜ್ಯಗಳಲ್ಲಿನ ಕೇಂದ್ರ ಯೋಜನೆಗಳನ್ನು ಮೋದಿ ಪರಿಶೀಲನೆ ನಡೆಸಿದ್ದಾರೆ. ಮುಂಬರುವ ಚುನಾವಣೆಗಳ ಕಾರ್ಯತಂತ್ರದ ಮಂತ್ರವನ್ನೂ ಮೋದಿ ಜಪಿಸಿದ್ದು, ಈಗಿನಿಂದಲೇ ಲೋಕಸಭೆ ಎಲೆಕ್ಷನ್‍ಗೆ ಸಿದ್ಧತೆ ಆರಂಭಿಸುವಂತೆ ಸೂಚಿಸಿದ್ದಾರೆ. ಈ ಸಭೆ ಬೆನ್ನಲೆ ಪಾಟ್ನಾದಲ್ಲಿ ಜುಲೈ 30-31 ರಂದು ಸಂಯುಕ್ತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆ ಕರೆಯಲಾಗಿದೆ.

#publictv #hrranganath #newscafe